• Inauguration Function
    Inagurated by our Hon.CM and our Society President Basavaraj Gurikar
  • Inauiguration Function
    The Function held in Teachers Welfare Association
  • Inauguration Function
    Seminar Photos taken in the Function of inaguration
  • Head office
    Society
  • Current Project
    Ready To Register Project
  • Inauguration Of DC office
    GNANA BHOOMI
  • Inauguration Of DC office
    GNANA BHOOMI
  • Inauguration Of DC office
    GNANA BHOOMI
  • Inauguration Of DC office
    GNANA BHOOMI
  • Inauguration Of DC office
    GNANA BHOOMI

Board Members

Shri Basavaraj Gurikar

(President, KARNATAKA STATE PRIMARY SCHOOL TEACHERS ASSOCIATION)


face
ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಫೆಡರೇಷನ್ ವತಿಯಿಂದ ರಾಷ್ಟ್ರ ಮಟ್ಟದ ಶೈಕ್ಷಣಿಕ ಸಮ್ಮೇಳನವು 2015ರ ಡಿಸೆಂಬರ್ 19,20ರಂದು ನೀಲಕಂಠ ಕನ್‌ವೆಷನ್ ಸೆಂಟರ್, ಎದುರುಗಡೆ, ನೈಸ್ ರೋಡ್ ಜಂಕ್ಷನ್, ತುಮಕೂರು ರಸ್ತೆ, ಬೆಂಗಳೂರು ಇಲ್ಲಿ ಜರುಗುತ್ತಿರುವುದು ಈ ನಾಡಿನ ಶಿಕ್ಷಕ ಸುಮುದಾಯಕ್ಕೆ ಸಂತಸ ತಂದಿದೆ. 2013 ರಲ್ಲಿ ಆಸ್ಸಾಂ ರಾಜಧಾನಿ ಗೌಹಾತಿಯಲ್ಲಿ 26ನೇ ದ್ವೈವಾರ್ಷಿಕ ರಾಷ್ಟ್ರಮಟ್ಟದ ಶೈಕ್ಷಣಿಕ ಸಮ್ಮೇಳನ ಜರುಗಿದ ಸಂದರ್ಭದಲ್ಲಿ 27ನೇ ದ್ವೈವಾರ್ಷಿಕ ರಾಷ್ಟ್ರ ಮಟ್ಟದ ಶೈಕ್ಷಣಿಕ ಸಮ್ಮೇಳನವನ್ನು 2015 ರಲ್ಲಿ ಬೆಂಗಳೂರಿನಲ್ಲಿ ಜರುಗಿಸಬೇಕೆಂಬ ಐತಿಹಾಸಿಕ ನಿರ್ಣಯವನ್ನು ಕೈಗೊಳ್ಳಲಾಯಿತು. ಈ ಮಹತ್ತರವಾದ, ಗುರುತರವಾದ ಜವಬ್ದಾರಿಯನ್ನು ನಿರ್ವಹಿಸುವ ಹೊಣೆಗಾರಿಕೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಒದಗಿ ಬಂದಿತು. ಇದು ಸಾಮಾನ್ಯ ಹೊಣೆಗಾರಿಕೆಯಲ್ಲ. ನಮ್ಮ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಕಕರ ಸಂಘದ ಸಂಘ ಶಕ್ತಿಯನ್ನು ಅವಲೋಕಿಸಿ ನೀಡಿದ ಹೊಣೆಗಾರಿಯಾಗಿದೆ. ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಫೆಡರೇಷನ್‌ದ ಸಂಯೋಜನೆ ಹೊಂದಿದ ಅತೀ ಕಡಿಮೆ ಅವಧಿಯಲ್ಲಿ ಈ ಜವಬ್ದಾರಿ ನಿರ್ವಹಿಸುವ ಅವಕಾಶ ಸಿಕ್ಕಿದೆ. ನಾನು ಭಾಗವಹಿಸಿದ ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಫೆಡರೇಷನ್‌ದ ಪ್ರಥಮ ರಾಷ್ಟ್ರ ಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ಮುಂದಿನ ಶೈಕ್ಷಣಿಕ ಸಮ್ಮೇಳನ ಸಂಘಟಿಸುವ ಜವಬ್ದಾರಿ ನಮ್ಮ ದಾಯಿತು. ರಾಜ್ಯಕ್ಕೆ ಸೀಮಿತವಾದ ಸಂಘ, ರಾಷ್ಟ್ರ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿಯೂ ಸಹ ತನ್ನ “ಛಾಪನ್ನು”ಮೂಡಿಸಬೇಕೆಂಬ ಆಸೆ ಸಹಜ, ರಾಷ್ಟ್ರದ, ಅಂತರ್ ರಾಷ್ಟ್ರೀಯ ಮಟ್ಟದಲ್ಲಿರುವ ಶಿಕ್ಷಕರುಗಳನ್ನು ಒಂದೆಡೆ ಸೇರಿಸಿ ಸಮ್ಮೇಳನ, ಸಮಾವೇಶ ಮಾಡುವುದರಿಂದ ಪರಸ್ಪರ ಸಹಕಾರ, ಪ್ರಾಥಮಿಕ ಶಿಕ್ಷಣದ ಸ್ಥಿತಿ-ಗತಿ, ಶಿಕ್ಷಕರ ಸೇವಾ ಸೌಲಭ್ಯಗಳು, ಪಠ್ಯಪುಸ್ತಕ, ಪಠ್ಯ ಕ್ರಮ, ಶಾಲಾ

Read More

ಶಿಕ್ಷಣ ವ್ಯವಸ್ಥೆ, ಇನ್ನಿತರ ಮಾಹಿತಿಗಳನ್ನು ಹಂಚಿಕೆ ಮಾಡಿಕೊಳ್ಳಲು ಅವಕಾಶವಾಗುವುದು. ಶಿಕ್ಷಕರೆಲ್ಲರೂ ಒಂದೇ (ಸಭೀ ಶಿಕ್ಷಕ್ ಏಕಿ ಹೈ) ಎಂಬ ಸಂದೇಶ ರವಾನೆಯಾಗುವುದು.

ಕೇಂದ್ರ ಸರ್ಕಾರ ಹೊಸ ರಾಷ್ಟೀಯ ಶಿಕ್ಷಣ ನೀತಿಯನ್ನು ಜಾರಿಗೆ ತರುವ ಈ ಸುಸಂದರ್ಭದಲ್ಲಿ 27ನೇ ದ್ವೈವಾರ್ಷಿಕ ರಾಷ್ಟ್ರೀಯ ಶೈಕ್ಷಣಿಕ ಸಮ್ಮೇಳನ ಜರುಗುತ್ತಿದೆ. ಕೇಂದ್ರ ಸರ್ಕಾರಕ್ಕೆ ಹೊಸ ಶಿಕ್ಷಣ ನೀತಿ ಯಾವ ರೀತಿ ಇರಬೇಕೆಂಬ ಬಗ್ಗೆ ಸಂಘದಿಂದ ಅಭಿಪ್ರಾಯ ನೀಡಬೇಕಾಗಿದೆ. ಶಿಕ್ಷಣ ಹಕ್ಕು ಕಾಯ್ದಿಯಲ್ಲಿ ಬದಲಾವಣೆಯಾಗಬೇಕು. 3 ವರ್ಷದಿಂದ 18 ವರ್ಷದವರಿಗೆ “ಉಚಿತ ಕಡ್ಡಾಯ ಶಿಕ್ಷಣ” ನೀಡಬೇಕು. “ಸರ್ಕಾರಿ ಶಾಲೆಗಳ ಸಬಲೀಕರಣ” ವರ್ಗಕ್ಕೆ ಒಬ್ಬ ಶಿಕ್ಷಕ ಶಾಲೆಗೆ ಒಬ್ಬ ಮುಖ್ಯೋಪಾಧ್ಯಾಯರುಗಳು ನಿಯುಕ್ತಿಯಾಗಬೇಕೆಂಬ ಹುಕ್ಕೋತ್ತಾಯ ಮಾಡಲಾಗಿದೆ. ಸರ್ಕಾರ “ಸರ್ಕಾರಿ ಶಾಲೆಗಳ ಸಬಲೀಕರಣ” ಮಾಡುವುದಕ್ಕಾಗಿ ಥಮಿಕ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಪ್ರಮಾಣದ ಹಣವನ್ನು ಬಜೆಟ್‌ನಲ್ಲಿ ಮೀಸಲಿಡಬೇಕು. ರಾಷ್ಟ್ರಾದ್ಯಂತ “ಸಮಾನ ಶಾಲಾ ಶಿಕ್ಷಣ ನೀತಿ” ಯನ್ನು ಜಾರಿಗೊಳಿಸಬೇಕು. ಈ ವಿಷಯವನ್ನು ಒಳಗೊಂಡು ಇನ್ನಿತರ ಶೈಕ್ಷಣಿಕ ಯೋಜನೆಗಳನ್ನು ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ, ಸಮ್ಮೇಳನದಲ್ಲಿ ಠರಾವು ಅಂಗೀಕರಿಸಲಾಗುವುದು.

ಶಿಕ್ಷಕರು ನೆಮ್ಮದಿಯಿಂದ ಬೋದನೆ ಮಾಡಬೇಕಾದರೆ ಸೇವಾ ಸೌಲಭ್ಯಗಳು ಉತ್ಕೃಷ್ಟ ಮಟ್ಟದಲ್ಲಿರಬೇಕು ಅಂದಾಗ ಮಾತ್ರ ದಕ್ಷತೆಯಿಂದ ಕಾರ್ಯ ನಿರ್ವಹಿಸಲು ಸಾಧ್ಯವಾಗುವುದು ಬೇರೆ ಬೇರೆ ದೇಶಗಳಲ್ಲಿ ಅದರಲ್ಲಿಯೂ ಸಹ ವಿಶೇಷವಾಗಿ ಮುಂದುವರೆದ ದೇಶಗಳಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರುಗಳಿಗೆ, ಉಳಿದ ಶಿಕ್ಷಕರುಗಳಿಗಿಂತ ಉನ್ನತವಾದ ವೇತನ ಶ್ರೇಣಿ, ಇನ್ನಿತರ ಸೇವಾ ಸೌಲಭ್ಯಗಳಿವೆ. ಆದರೆ ನಮ್ಮ ದೇಶದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು ಅತೀ ಕಡಿಮೆ ವೇತನ ಪಡೆಯುವ ಪರಿಸ್ಥಿತಿ ಇದೆ. ಉನ್ನತ ಮಟ್ಟದ ವೇತನ ಶ್ರೇಣಿಗಳನ್ನು ನೀಡುವ ವ್ಯವಸ್ಥೆ ಮಾಡುವುದರ ಜೊತೆಗೆ ಪ್ರಾಥಮಿಕ ಶಾಲಾ ಶಿಕ್ಷಕರುಗಳಿಗೆ ಜಿಲ್ಲಾ ಉಪನಿರ್ದೇಶಕ ಹುದ್ದೆಯವರಿಗೆ ಬಡ್ತಿ ನೀಡುವ ಅವಕಾಶವಾಗಬೇಕು. ಶಿಕ್ಷಣ ಇಲಾಖೆಯಲ್ಲಿ 4ನೇ ದರ್ಜೆಯ ನೌಕರರಾಗಿ ಸೇವೆಗೆ ಸೇರಿದ ಒಬ್ಬ ವ್ಯಕ್ತಿ ಎಸ್.ಡಿ.ಎ. ಎಫ್.ಡಿ.ಎ. ಸೂಪರ್‌ಡೆಂಟ್, ಮ್ಯಾನೇಜರ್, ಪತ್ರಾಂಕಿತ ಅಧಿಕಾರಿ (ಜಿ.ಎ) ಎಸ್.ಎ.ಡಿ.ಪಿ.ಐ. ಹುದ್ದೆಯವರಿಗೆ ಬಡ್ತಿ ಪಡೆಯುತ್ತಾರೆ. ಪ್ರೌಢಶಾಲಾ ಮುಖ್ಯೋಪಾಧ್ಯಾಯರಾಗಿ ನೇಮಕಗೊಂಡ ವ್ಯಕ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ, ಉಪನಿರ್ಧೇಶಕ, ಸಹ ನಿರ್ದೇಶಕರು, ನಿರ್ದೇಶಕ ಹುದ್ದೆಯವರೆಗೆ ಬಡ್ತಿ ಪಡೆಯುವ ವ್ಯವಸ್ಥೆ ಇದೆ. ಪ್ರಾಥಮಿಕ ಶಾಲಾ ಶಿಕ್ಷಕ, ಶಿಕ್ಷಕನಾಗಿಯೇ ನಿವೃತ್ತಿ ಹೊಂದುತ್ತಾರೆ (1 ಲಕ್ಷ 86 ಸಾವಿರ ಶಿಕ್ಷಕರ ಹುದ್ದೆಗಳಲ್ಲಿ ಕೇವಲ 13000 ಶಿಕ್ಷಕರು ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾಗಿ ಬಡ್ತಿ ಪಡೆಯುತ್ತಾರೆ) ಮುಂಬಡ್ತಿ ಎಂಬುವುದು “ಗಗನ ಕುಸುಮ” ವಾಗಿದೆ. ಸರ್ಕಾರ ಈ ಭೇದಭಾವ ಹೋಗಲಾಡಿಸಿ ಪ್ರಾಥಮಿಕ ಶಾಲಾ ಶಿಕ್ಷಕರುಗಳಿಗೆ ಡಿಡಿಪಿ‌ಐ ಹುದ್ದೆಯ ವರೆಗೆ ಬಡ್ತಿ ನೀಡುವ ವ್ಯವಸ್ಥೆಯಾಗಬೇಕು. ಈ ಎಲ್ಲ ಬೇಡಿಕೆಗಳನ್ನು ಒಳಗೊಂಡು ಇನ್ನುಳಿದ ಎಲ್ಲ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಿರ್ಣಯ ಅಂಗೀಕರಿಸಲಾಗುವುದು.

ರಾಷ್ಟ್ರ ಮಟ್ಟದ ಶೈಕ್ಷಣಿಕ ಸಮ್ಮೇಳನವನ್ನು 1954ರಲ್ಲಿ ಆಗಿನ ಪ್ರಧಾನ ಮಂತ್ರಿ ಸನ್ಮಾನ್ಯ ಶ್ರೀ. ದಿಃ ಜವಹರ್‌ಲಾಲ್ ನೆಹರು ರವರಿಂದ ಉದ್ಘಾಟನೆಗೊಂಡ ಹೆಗ್ಗಳಿಕೆ ಸಂಘದ್ದಾಗಿದೆ. ರಾಷ್ಟ್ರ ಮಟ್ಟದ 27ನೇ ಶೈಕ್ಷಣಿಕ ಸಮ್ಮೇಳನದ ಮುಖಾಂತರ ನಾವು ನಮ್ಮ ಶಿಕ್ಷಕ ಸಮುದಾಯದ “ನೈಜ ಶಕ್ತಿ”ಯ ಬಹಿರಂಗ ಪ್ರದರ್ಶನ ಮಾಡಬೇಕಾಗಿದೆ. ಇವತ್ತಿನ ಆಡಳಿತ ವ್ಯವಸ್ಥೆಯಲ್ಲಿ ಇದು ಅನಿವಾರ್ಯವಗಿದೆ. ಸರ್ಕಾರಿ ವ್ಯವಸ್ಥೆ ಉಳಿವಿಗಾಗಿ ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಈ ಸಮ್ಮೇಳನದಲ್ಲಿ ಅಂಗೀಕರಿಸುವ ನಿರ್ಣಯಗಳು ಮುಂಬರುವ ದಿವಸಗಳಲ್ಲಿ ದಿಕ್ಸೂಚಿಯಾಗಲಿವೆ. ಹಲವಾರು ಸಮಸ್ಯೆಗಳ ಸುಳಿಯಲ್ಲಿ ಸಿಕ್ಕು ತೊಳಲಾಡುತ್ತಿರುವ ಶಿಕ್ಷಕ ಸಮುದಾಯಕ್ಕೆ ಈ ಶೈಕ್ಷಣಿಕ ಸಮ್ಮೇಳನ “ಹೊಸ ಬೆಳಕ”ನ್ನು ಚೆಲ್ಲಬಲ್ಲದು ಎಂಬ ನಂಬಿಕೆ ಸಂಘದ್ದಾಗಿದೆ.

1994ರಿಂದ 2005, 2009, 2011, 2014ರ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನವನ್ನು ಸಂಘಟಿಸಿ ಯಶಸ್ವಿಗೊಳಿಸುವುದರ ಮುಖಾಂತರ, ಕರ್ನಾಟಕ ರಾಜ್ಯದ ಶಿಕ್ಷಕರ ಸಂಘ ಶಕ್ತಿಯನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಬಹುತೇಕ ಪ್ರಮುಖ ಬೇಡಿಕೆಗಳಾದ

1. 5 ಮತ್ತು 6ನೇ ವೇತನ ಆಯೋಗದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರುಗಳಿಗೆ ಪ್ರತ್ಯೇಕ ವೇತನ ಶ್ರೇಣಿ.
2. 300 ರೂ ವಿಶೇಷ ವೇತನದ ಮಂಜೂರಾತಿ
3. ಜಿಲ್ಲೆಯಿಂದ ಜಿಲ್ಲೆಗೆ ವರ್ಗಾವಾಗಿ ಬಂದ ಶಿಕ್ಷಕರುಗಳಿಗೆ 10,15,20,25,30 ವರ್ಷದ ಆರ್ಥಿಕ ಸೇವಾ ಸೌಲಭ್ಯ ಒದಗಿಸಿದ್ದು. ಪರಿಹಾರ ಬೋಧನೆ
4. ಪರಿಹಾರ ಬೊಧನೆ
5. ಸಂಯುಕ್ತ ಪ್ರೌಢ ಶಾಲಾ ಪದ್ಧತಿ ರದ್ಧತಿ
6. 6-8ನೇ ವರ್ಗಕ್ಕೆ ಬಡ್ತಿ ನೀಡುವಾಗ ಪದವೀಧರ ಶಿಕ್ಷಕರುಗಳಲ್ಲಿ ಶೇಕಡಾ 25% ರಷ್ಟು ಮೀಸಲಾತಿ.
7. ಕ್ಲಸ್ಟರ್ ಆಡಳಿತ ವ್ಯವಸ್ಥೆ ರದ್ದು.
8. ನಿರಂತರ ವ್ಯಾಪಕ ಮೌಲ್ಯಮಾಪನ ಸರಳೀಕರಣ
9. ಮೌಲ್ಯಾಂಕನ ಪದ್ಧತಿ- ರದ್ಧತಿ

ಈ ಎಲ್ಲ ಬೇಡಿಕೆಗಳನ್ನು ಈಡೇರಿಸುವುದರ ಜೊತೆಗೆ ನಮ್ಮ ಅವಧಿಯಲ್ಲಿ 25ಕ್ಕೂ ಹೆಚ್ಚು ಬೇಡಿಕೆಗಳನ್ನು ಈಡೇರಿಸಿಕೊಳ್ಳುವಲ್ಲಿ ಸಂಘ ಸಂಪೂರ್ಣ ಯಶಸ್ವಿಯನ್ನು ಹೊಂದಿದೆ ಎಂದು ಅಭಿಮಾನ ಪೂರ್ವಕವಾಗಿ ಹೆಮ್ಮೆಯಿಂದ ಹೇಳ ಬಯಸುತ್ತೇವೆ.

ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಫೆಡರೇಷನ್‌ನ ವತಿಯಿಂದ 2015ರ ಡಿಸೆಂಬರ್ 18 ರಿಂದ 20ರ ವರೆಗೆ ಜರುಗುವ ಈ ಶೈಕ್ಷಣಿಕ ಸಮ್ಮೇಳನ ದೇಶಕ್ಕೆ, ವಿಶ್ವಕ್ಕೆ ಮಾದರಿಯಾಗುವ ರೀತಿಯಲ್ಲಿ ಯಶಸ್ವಿಯಾಗಲಿದೆ. ಇಂತಹ ರಾಷ್ಟ್ರ ಮಟ್ಟದ ಶೈಕ್ಷಣಿಕ ಸಮ್ಮೇಳನಕ್ಕೆ ಆರ್ಥಿಕ ವ್ಯವಸ್ಥೆ ಬಹಳಷ್ಟು ಬೇಕಾಗುತ್ತದೆ. ಸಂಘದ ನಿರ್ಣಯದ ಪ್ರಕಾರ ರಾಜ್ಯದ ಶಿಕ್ಷಕರಿಂದ 300 ರೂಪಾಯಿ ಪ್ರತಿನಿಧಿ ಶುಲ್ಕ ಸಂಗ್ರಹಿಸಲು ನಿರ್ಣಯಿಸಲಾಗಿದೆ. ಸರ್ಕಾರ ಹಾಗೂ ಬೇರೆ ಬೇರೆ ಸಂಘ ಸಂಸ್ಥೆಗಳಿಗೂ ದೇಣಿಗೆ ನೀಡುವಂತೆ ಮನವಿ ಮಾಡಿದ್ದೇವೆ. ರಾಜ್ಯದ ಶಿಕ್ಷಕರು ತನು, ಮನ, ಧನದ ಸಹಾಯ, ಸಹಕಾರ ನೀಡಿ ಸಮ್ಮೇಳನ ಯಶಸ್ವಿ ಮಾಡುತ್ತಾರೆಂಬ ವಿಶ್ವಾಸವಿದೆ. ಈ ಶೈಕ್ಷಣಿಕ ಸಮ್ಮೇಳನಕ್ಕೆ ದೇಶ – ವಿದೇಶಗಳಿಂದಲೂ ಸಹ ಶಿಕ್ಷಕ ಪ್ರತಿನಿಧಿಗಳು, ಶಿಕ್ಷಣ ತಜ್ಷರು, ಶಿಕ್ಷಕರು ಆಗಮಿಸುವ ನಿರೀಕ್ಷೆ ಇದೆ. ಇಲ್ಲಿಯವರೆಗೆ ಜರುಗಿದ ರಾಷ್ಟ ಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ಈ ರೀತಿ ವ್ಯವಸ್ಥೆ ಮಾಡಿರಲಿಲ್ಲ. ರಾಜ್ಯ ಸಂಘದ ವತಿಯಿಂದ ಆಗಮಿಸುವ ಪ್ರತಿನಿಧಿಗಳಿಗೆ ಊಟ, ವಸತಿ, ಸಾರಿಗೆ, ಇನ್ನಿತರ ಮೂಲಭೂತ ಸೌಲಭ್ಯಗಳ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಎಲ್ಲರ ಸಹಕಾರ ಅವಶ್ಯಕವಾಗಿದೆ. ಕರ್ನಾಟಕ ಘನ ಸರ್ಕಾರ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ. ಸಿದ್ದರಾಮಯ್ಯರವರು, ಕೇಂದ್ರ ಮಾನವ ಸಂಪನ್ಮೂಲ ಸಚಿವರಾದ ಸನ್ಮಾನ್ಯ ಶ್ರೀಮತಿ. ಸ್ಮೃತಿ ಇರಾನಿ ಜಿ ರವರು, ಕೇಂದ್ರ ರಾಸಾಯನಿಕ ರಸಗೊಬ್ಬರ ಸಚಿವರಾದ ಸನ್ಮಾನ್ಯ ಆನಂತಕುಮಾರ ರವರು, ಕಾನೂನು ಸಚಿವರಾದ ಸನ್ಮಾನ್ಯ ಶ್ರೀ. ಸದಾನಂದಗೌಡರು ರವರು, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ಸನ್ಮಾನ್ಯ ಶ್ರೀ. ಕಿಮ್ಮನೆ ರತ್ನಾಕರ್ ರವರು ಇನ್ನಿತರ ಸಚಿವರು, ಶಾಸಕರು, ಲೋಕಸಭಾ ಸದಸ್ಯರು ಆಗಮಿಸುವ ನಿರೀಕ್ಷೆ ಇದೆ.

ಗುಣಾತ್ಮಕ ಶಿಕ್ಷಣದಿಂದ ಸಮಗ್ರ ಅಭಿವೃದ್ಧಿ, ಉತ್ತಮ ಶಿಕ್ಷಣ, ಉತ್ತಮ ಭಾರತ, “ಬೇಟಿ ಬಚಾವೋ” “ಬೇಟಿ ಪಡಾವೊ” “ಹೊಸ ರಾಷ್ಟ್ರೀಯ ಶಿಕ್ಷಣ” “ಶಿಕ್ಷಣದ ವ್ಯಾಪಾರೀಕರಣ” ಇನ್ನಿತರ ವಿಷಯಗಳ ಕುರಿತು ಎಜ್ಯುಕೇಷನ್ ಇಂಟರ್ ನ್ಯಾಷನಲ್‌ದಲ್ಲಿ (EI) ಮುಖ್ಯಸ್ಥರಾದ ಶ್ರೀಮತಿ. ಶಶಿಬಾಲ ಸಿಂಗ್, NCE ಸಂಚಾಲಕರಾದ ಶ್ರೀ. ರಮಾಕಾಂತ್ ರಾಯ್, RTO ಪೊರಂ ಶ್ರೀ ಅಂಬರೀಶ್ ರಾಯ್ ರವರು, ಡಾ|| ನಿರಂಜನಾರಾಧ್ಯ ವಿ.ಪಿ. ಇನ್ನಿತರ ಶಿಕ್ಷಣ ತಜ್ಞರು ವಿಷಯ ಮಂಡನೆ ಮಾಡಲಿದ್ದಾರೆ.
ಗುಣಾತ್ಮಕ ಶಿಕ್ಷಣ ನೀಡಬೇಕಾದರೆ, ಮೊದಲು ಶಿಕ್ಷಕರ ಸಮಸ್ಯೆಗಳು ಬಗೆಹರಿಯಬೇಕು, ಅಂದಾಗ ಮಾತ್ರ ಗುಣಾತ್ಮಕತೆ ಬರಲು ಸಾಧ್ಯ ಈ ದಿಸೆಯಲ್ಲಿ ಸರ್ಕಾರ ಮುಖ್ಯವಾಗಿ ಶಿಕ್ಷಕರ ಎಲ್ಲ ಬೇಕು-ಬೇಡಿಕೆಗಳನ್ನು ಈಡೇರಿಸಬೇಕು. ಶಿಕ್ಷಕರುಗಳನ್ನು ಶಿಕ್ಷಣೇತರ ಕಾರ್ಯಗಳಿಂದ ವಿಮುಕ್ತಿಗೊಳಿಸಬೇಕು. ಶಿಕ್ಷಕರ ಸಮಸ್ಯೆಗಳನ್ನು ಬಗೆ ಹರಿಸಲು ರಾಜ್ಯ, ಜಿಲ್ಲಾ, ತಾಲ್ಲೂಕು, ಮಟ್ಟದಲ್ಲಿ ಜಂಟಿ ಸಮಾಲೋಚನಾ ಸಮಿತಿ (JCM) ಯನ್ನು ರಚಿಸಬೇಕು ಈ ರಾಷ್ಟ್ರೀಯ ಶೈಕ್ಷಣಿಕ ಸಮ್ಮೇಳನದಲ್ಲಿ ಮಂಡಿಸಿದ ನಿರ್ಣಯಗಳನ್ನು ಸರ್ಕಾರ ಅಂಗೀಕರಿಸಿ, ಅನುಷ್ಠಾನಗೊಳಿಸಬೇಕು. ಯಾವುದೇ ಕಾರಣಕ್ಕೂ ಶಿಕ್ಷಕರನ್ನು ಕಡೆಗಣಿಸಬಾರದು. ಸಂಘ ಶಿಕ್ಷಕರ ಬೇಕು-ಬೇಡಿಕೆಗಳನ್ನು ಈಡೇರಿಸುವ ಜೊತೆಗೆ ಗುಣಾತ್ಮಕ ಶಿಕ್ಷಣ, ಸರ್ಕಾರಿ ಶಾಲೆಗಳ ಸಬಲೀಕರಣ, ಶಾಲಾ ಶಿಕ್ಷಣ ವ್ಯವಸ್ಥೆಗೆ ಕಾರ್ಯಕ್ರಮ ರೂಪಿಸುತ್ತಿದೆ ಎಂದು ಹೇಳಬಯಸುತ್ತೇನೆ. ಸಮ್ಮೇಳನದ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು. ಈ ಸಂಚಿಕೆಗೆ ಲೇಖನ, ಜಾಹೀರಾತು, ಕಳುಹಿಸಿದ ಎಲ್ಲ ಸ್ನೇಹಿತರಿಗೂ ಹೊರಬರಲು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.




Shri K.M.Narayan Swamy

(General Secretary, KARNATAKA STATE PRIMARY SCHOOL TEACHERS ASSOCIATION)


face
ರಾಜ್ಯ ಮಟ್ಟದ ಸಮ್ಮೇಳನಗಳನ್ನು ಯಶಸ್ವಿಗೊಳಿಸಿದ ನಮ್ಮ ಸಂಘಕ್ಕೆ, ಈಗ ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಫೆಡರೇಷನ್‌ದ 27ನೇ ರಾಷ್ಟ್ರ ಮಟ್ಟದ ಶೈಕ್ಷಣಿಕ ಸಮ್ಮೇಳನ ಯಶಸ್ವಿಗೊಳಿಸುವ ಜವಬ್ದಾರಿ ವಹಿಸಿರುವುದು ಹೆಮ್ಮೆಯ ಸಂಗತಿ. ಪ್ರತಿ ತಾಲ್ಲೂಕು ಜಿಲ್ಲೆ, ರಾಜ್ಯ ಮಟ್ಟದ ಎಲ್ಲ ಪದಾಧಿಕಾರಿಗಳ, ಸಮಸ್ತ ಶಿಕ್ಷಕರುಗಳ ಸಹಕಾರದಿಂದ ಸಮ್ಮೇಳನವನ್ನು ಯಶಸ್ವಿಗೊಳಿಸುತ್ತೇವೆ. ಶೈಕ್ಷಣಿಕ ಸಮ್ಮೇಳನದ ನಿಮಿತ್ತ ಹೊರತರುವ ಸ್ಮರಣ ಸಂಚಿಕೆಗೆ ನಮ್ಮ ಸಂಘದ ವರದಿಯನ್ನು ನೀಡುವ ಮುಖಾಂತರ ಇಡೀ ದೇಶ, ವಿಶ್ವಕ್ಕೆ ನಮ್ಮ ಸಂಘದ ಸಾಧನೆಯನ್ನು ಒದಗಿಸುವ ಸಂಕ್ಷಿಪ್ತ ಪ್ರಯತ್ನ ಮಾಡಿದ್ದೇನೆ.
ಸಂಘ ಸಾಗಿ ಬಂದ ಹಾದಿ : 1970-71ರ ದಶಕದಲ್ಲಿ ಸ್ಥಾಪಿತವಾದ ಸಂಘ ಶಿಕ್ಷಕರ ಆಶೋತ್ತರಗಳನ್ನು ಈಡೇರಿಸುವಲ್ಲಿ ಸಫಲತೆಯನ್ನು ಕಂಡಿದೆ. ಈ ನಾಡಿನ ಪ್ರತಿ ಹಳ್ಳಿ, ಪಟ್ಟಣ ನಗರ ಪ್ರದೇಶಗಳಲ್ಲಿ ಕಾರ್ಯ ಮಾಡುವ ಶಿಕ್ಷಕ ಸಮುದಾಯದ ಸಮಸ್ಯೆಗಳನ್ನು ಕ್ರೊಡೀಕರಿಸಿ ಸಂಘಟನೆಯನ್ನು ಬಲಗೊಳಿಸಿ ಎಲ್ಲ ಅಡೆ-ತಡೆಗಳನ್ನು ನಿವಾರಿಸಿ, ಶಿಕ್ಷಕರ ಅಭ್ಯುದಾಯಕ್ಕಾಗಿ ಶ್ರಮಿಸುವ ಏಕೈಕ ಸಂಘಟನೆಯಾಗಿದೆ. ಸಂಘಕ್ಕಾಗಿ, ಶಿಕ್ಷಕರಿಗಾಗಿ ತಮ್ಮ ಇಡೀ ಜೀವನವನ್ನೇ ಮುಡುಪಾಗಿಟ್ಟ ಹೆಗ್ಗಳಿಕೆ ನಮ್ಮ ಸಂಘದ ರಾಜ್ಯ ಅಧ್ಯಕ್ಷರಾದ ಬಸವರಾಜ ಗುರಿಕಾರ ರವರದು. ಪ್ರತಿಯೊಬ್ಬ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂಧಿಸುತ್ತಾ ಸಹನೆಯಿಂದ ಉತ್ತರಿಸುತ್ತಾ ದಿನವಿಡೀ ಶಿಕ್ಷಕರ ಸಂಘಕ್ಕಾಗಿ ಕಾರ್ಯನಿರ್ವಹಿಸುತ್ತಿರುವುದು ನಮ್ಮೆಲ್ಲರಿಗೂ ಅನುಕರಣಿಯವಾಗಿದೆ. ರಾಜ್ಯಾಧ್ಯಕ್ಷರಾದ ಬಸವರಾಜ ಗುರಿಕಾರ ರವರ ಘನ ಅಧ್ಯಕ್ಷತೆಯಲ್ಲಿ ಬಹಳಷ್ಟು ಬೇಕು ಬೇಡಿಕೆಗಳು ಈಡೇರಿವೆ. ಸಂಘ ಬಲಾಡ್ಯ ಸಂಘವಾಗಿ ಬೆಳೆದಿದೆ ಎಂದು ಅಭಿಮಾನಪೂರ್ವಕವಾಗಿ ಹೇಳಬಯಸುತ್ತೇನೆ. ಸಂಘ ಮತ್ತು ಸಂಘಟನೆಗೆ ಸದೃಡ ನಾಯಕತ್ವ ದೊರೆತಾಗ ಮಾತ್ರ ಬೇಡಿಕೆಗಳು ಈಡೇರುವುದರ ಜೊತೆಗೆ ಸಂಘಟನೆ ಬಲಾಡ್ಯವಾಗುತ್ತದೆ.

Read More

ಅಂತ ದೀವಂತ ನಾಯಕತ್ವ ಇರುವ ಶ್ರೀ ಬಸವರಾಜ ಗುರಿಕಾರ ರವರ ನಾಯಕತ್ವ ಸಂಘಕ್ಕೆ ದೊರೆತಿದೆ. ಸಮಯ ಪ್ರಜ್ಞೆಯಿಂದ ಸಮಸ್ಯೆಗಳನ್ನು ಅರಿತು, ವಸ್ತು ನಿಷ್ಠವಾಗಿ ತರ್ಕ ಬದ್ಧವಾಗಿ ಬೇಡಿಕೆಗಳನ್ನು ಮಂಡಿಸುವ ಕಲೆ ವಿಶೇಷವಾಗಿ ನಮ್ಮ ಅಧ್ಯಕ್ಷರಾದ ಶ್ರೀ. ಬಸವರಾಜ ಗುರಿಕಾರ ರವರದು ಎಂದು ಅಭಿಮಾನದಿಂದ ಹೇಳುತ್ತೇನೆ. ಸಂಘದ ಬೈಲಾ ರಚನೆ ಮಾಡುವುದರ ಜೊತೆಗೆ ವೇತನ ಆಯೋಗ ಸಮಿತಿಗಳಿಗೆ ವಸ್ತು ನಿಷ್ಠವಾದ ವರದಿ ತಯಾರಿಸಿದ ಹೆಗ್ಗಳಿಕೆ ಇವರದಾಗಿದೆ. ಪ್ರಾಥಮಿಕ ಶಾಲಾ ಶಿಕ್ಷಕರುಗಳಿಗೆ ಪ್ರತ್ಯೇಕ ವೇತನ ಶ್ರೇಣಿ ನಿಗಧಿಗೊಳಿಸಲು ಶ್ರಮಿಸಿದ್ದು ಸಫಲತೆಯನ್ನು ಕಂಡಿದ್ದೇವೆ. 200 ರೂ ವಿಶೇಷ ವೇತನವನ್ನು 300 ರೂಪಾಯಿಗೆ ಹೆಚ್ಚಿಸಿದ್ದು 25,30 ವರ್ಷ ಸೇವೆ ಸಲ್ಲಿಸಿದ ಶಿಕ್ಷಕರುಗಳಿಗೆ ಹೆಚ್ಚುವರಿ ವೇತನ ಬಡ್ತಿ ಒದಗಿಸಿಕೊಟ್ಟಿರುವುದರ ಜೊತೆಗೆ 25 ಬೇಡಿಕೆಗಳು ಈಡೇರಿವೆ ಎಂದು ತಿಳಿಸಲು ಸಂತೋಷವಾಗುತ್ತದೆ.

ಶೈಕ್ಷಣಿಕ ಸಮ್ಮೇಳನಗಳು : ನಾಡಿನ ಐತಿಹಾಸಿಕ ಸ್ಥಳ ಕೂಡಲಸಂಗಮದಲ್ಲಿ ದಿನಾಂಕ: 31-01-2009 ರಂದು ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನ ಜರುಗುವ ಮುಖಾಂತರ ಸಂಘ ಶಕ್ತಿಯ ಬಹಿರಂಗ ಪ್ರದರ್ಶನವನ್ನು ಮಾಡುವುದರ ಮೂಲಕ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ನಾಂದಿ ಹಾಡಲಾಯಿತು. ಕರ್ನಾಟಕ ಸರ್ಕಾರದ ಆಗಿ‌ನ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ. ಬಿ.ಎಸ್. ಯಡಿಯೂರಪ್ಪ ರವರು ಉದ್ಘಾಟಿಸುವುದರ ಮುಖಾಂತರ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಕೇಂದ್ರ ಸಚಿವರಾದ ಸನ್ಮಾನ್ಯ ಶ್ರೀ. ಆನಂತ ಕುಮಾರ್, ಆಗಿನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ಸನ್ಮಾನ್ಯ ಶ್ರೀ. ವಿಶ್ವೇಶ್ವರ ಹೆಗಡೆ ಕಾಗೇರಿ ಸಂಘ ಶಕ್ತಿಯ ಪ್ರಶಂಸೆಯ ಮಾತುಗಳನ್ನಾಡಿದರು. ಲಕ್ಷಾಂತರ ಶಿಕ್ಷಕ ಸಮೂಹ ಸೇರಿದ್ದನ್ನು ಗಮನಿಸಿದ ಮಾಧ್ಯಮಗಳು ಕೂಡಲಸಂಗಮದಲ್ಲಿ “ಗುರು ಸಮಾಗಮ” ಎಂದು ಬಣ್ಣಿಸಿದ್ದವು. ದಿನಾಂಕ: 28-07-2011 ರಂದು ಅರಮನೆ ಆವರಣ ಬೆಂಗಳೂರು ಇಲ್ಲಿ ಜರುಗಿದ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನವನ್ನು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾದ ಸನ್ಮಾನ್ಯ ಶ್ರೀ. ವಿಶ್ವೇಶ್ವರ ಕಾಗೇರಿ ಉದ್ಘಾಟಿಸಿದರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯದಲ್ಲಿ ಬಲಾಡ್ಯ ಸಂಘವಾಗಿದ್ದು, ಸಂಘವು ಸರ್ಕಾರದ ಉತ್ತಮ ಬಾಂಧವ್ಯ ಹೊಂದುವ ಮುಖಾಂತರ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಅತ್ಯಂತ ಸಮರ್ಥನೀಯ ಕಾರ್ಯ ಮಾಡಿದೆ ಎಂದರು. ಸಮ್ಮೇಳನದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಶಿಕ್ಷಕರು ಭಾಗವಹಿಸಿದ್ದರು.

2014ರ ಫೆಬ್ರವರಿ 15 ರಂದು ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನ ಹುಬ್ಬಳಿಯ ನೆಹರು ಮೈದಾನದಲ್ಲಿ ಜರುಗಿತು. ಎಲ್ಲಿ ನೋಡಿದರಲ್ಲಿ ಶಿಕ್ಷಕ ಸಮೂಹ, ಲಕ್ಕಕ್ಕೂ ಹೆಚ್ಚು ಶಿಕ್ಷಕರು ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಮಾನ್ಯ ಪ್ರಾಥಮಿಕ ಹಾಗೂ ಫ್ರೌಢ ಶಿಕ್ಷಣ ಸಚಿವರಾದ ಸನ್ಮಾನ್ಯ ಶ್ರೀ. ಕಿಮ್ಮನೆ ರತ್ನಾಕರ್ ರವರು ಸಮ್ಮೇಳನ ಉದ್ಘಾಟಿಸಿ, ಶಿಕ್ಷಕರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು. ಸಂಘಟನೆಗಳ ಇತಿಹಾಸದಲ್ಲಿ 6 ವರ್ಷಗಳಲ್ಲಿ 3 ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನವನ್ನು ಜರುಗಿಸಿ ಯಶಸ್ವಿಗೊಳಿಸಿದ ಹೆಗ್ಗಳಿಕೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ್ದಾಗಿದೆ. ಬೇರಾವ ಸಂಘಟನೆಗಳು ಈ ನಾಡಿನಲ್ಲಿ ಇಂತಹ ಸಾಧನೆ ಮಾಡಿಲ್ಲ ಎಂಬ ಭಾವನೆ ನಮ್ಮದ್ದಾಗಿದೆ.

ವಿವಿಧ ಕಾರ್ಯಕ್ರಮ ಕಾರ್ಯಗಾರಗಳು : ದಿನಾಂಕ: 17-07-2010 ಹಾಗೂ 18-07-2010 ರಂದು ಸೇವಾಲಯ ಧಾರವಾಡ ಮತ್ತು ಕಲಾಭವನ ಧಾರವಾಡ ಇಲ್ಲಿ ತಾಲ್ಲೂಕು, ಜಿಲ್ಲಾ ಅಧ್ಯಕ್ಷ ಕಾರ್ಯದರ್ಶಿ, ಪದಾಧಿಕಾರಿಗಳ, ಪ್ರತಿನಿಧಿಗಳ ಎರಡು ದಿವಸದ ಕಾರ್ಯಗಾರವನ್ನು ಜಲಸಂಪನ್ಮೂಲ ಸಚಿವರಾದ ಸನ್ಮಾನ್ಯ ಶ್ರೀ. ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಸಂಘ ರಚನ್ಮಾತಕ ಕಾರ್ಯಕ್ರಮ ಮಾಡುವ ಮುಖಾಂತರ ಪ್ರಾಥಮಿಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವಲ್ಲಿ ಮಾದರಿ ಸಂಘವಾಗಿದೆ ಎಂದರು.

ದಿನಾಂಕ: 18-07-2010 ರಂದು ಜರುಗಿದ ಕಾರ್ಯಗಾರವನ್ನು ಮುಖ್ಯಮಂತ್ರಿ ಸನ್ಮಾನ್ಯ ಶ್ರೀ. ಜಗದೀಶ್ ಶೆಟ್ಟರ್ ಉದ್ಘಾಟಿಸಿದರು. ಶಿಕ್ಷಕರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು.

ದುಂಡು ಮೇಜಿನ ಪರಿಷತ್ತು : ದಿನಾಂಕ: 26-03-2011 ರಂದು ಶಿಕ್ಷಕ ಸದನ, ಬೆಂಗಳೂರು ಇಲ್ಲಿ ದುಂಡು ಮೇಜಿನ ಪರಿಷತ್ ಜರುಗಿತು ಪರಿಷತ್ ಸಭೆಯಲ್ಲಿ ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ. ಮಗು ಮತ್ತು ಕಾನೂನು ಕೇಂದ್ರ, ಭಾರತ ವಿಶ್ವವಿದ್ಯಾಲಯ ರಾಷ್ಟ್ರೀಯ ಕಾನೂನು ಶಾಲೆ ಬೆಂಗಳೂರು ಅಖಿಲ ಭಾರತ ಬ್ಯಾಂಕ್ ನೌಕರರ ಒಕ್ಕೂಟ ಇನ್ನಿತರ ಸಂಘಟನೆಗಳು ಭಾಗವಹಿಸಿದ್ದವು. ದುಂಡು ಮೇಜಿನ ಪರಿಷತ್ತನ್ನು ಮಾನವ ಧರ್ಮ ಪೀಠದ ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಉದ್ಘಾಟಿಸಿದರು. ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ರಾಜೇಂದ್ರಬಾಬು, ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಜಿ.ಕುಮಾರ್ ನಾಯಕ್, ಪ್ರೋ. ಬಾಬು ಮ್ಯಾಥೋ, ವಿರೋದ ಪಕ್ಷದ ನಾಯಕಿ ಶ್ರೀಮತಿ. ಮೋಟಮ್ಮ, ಪ್ರಜಾವಾಣಿ ಉಪ ಸಂಪಾದಕಿ ಶ್ರೀಮತಿ. ಮಂಜುಳಾ, ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಜಯಣ್ಣ, ಅಖಿಲ ಭಾರತ ಬ್ಯಾಂಕ್ ನೌಕರರ ಒಕ್ಕೂಟದ ಅಧ್ಯಕ್ಷ ವಿಶ್ವನಾಥ್ ನಾಯಕ್, ಹಂಪಿ ವಿಶ್ವವಿದ್ಯಾಲಯ ಪ್ರಾದ್ಯಾಪಕ ಡಾ:ಪ್ರಶಾಂತ, ಶಿಕ್ಷಣ ತಜ್ಞ ಡಾ: ವಿ.ಪಿ. ನಿರಂಜನಾರಾಧ್ಯ ಭಾಗವಹಿಸಿದ್ದರು. ಈ ಸಭೆಯಲ್ಲಿ ಸಮಾನ ಗುಣಮಟ್ಟದ ಶಿಕ್ಷಣಕ್ಕಾಗಿ ನಾಗರೀಕ ಸನ್ನದು ರಚಿಸಲಾಯಿತು. ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ವತಿಯಿಂದ ಸಮನ್ವಯ ವೇದಿಕೆ ರಚಿಸಲಾಯಿತು.

ಅಂತರ್-ರಾಷ್ಟ್ರೀಯ ಶಿಕ್ಷಕರ ದಿನಾಚರಣೆ : ಅಕ್ಟೋಬರ್ 5 ರಂದು ವಿಶ್ವದಾದ್ಯಂತ ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತಿದೆ. ಆದರೆ ಕರ್ನಾಟಕ ರಾಜ್ಯದಲ್ಲಿ ಅಂತರ್ ರಾಷ್ಟ್ರೀಯ ಶಿಕ್ಷಕ ದಿನಾಚರಣೆ ಮಾಡುತ್ತಿರಲಿಲ್ಲ 2010 ರಿಂದ ಪ್ರತಿ ವರ್ಷ ಅಂತರ್ ರಾಷ್ಟ್ರೀಯ ಶಿಕ್ಷಕರ ದಿನಾಚರಣೆಯನ್ನು ಶಿಕ್ಷಕ ಸದನ ಬೆಂಗಳೂರು ಇಲ್ಲಿ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಪ್ರತಿ ಜಿಲ್ಲೆಯಿಂದ ಒಬ್ಬರಿಗೆ ಸರ್ವೋತ್ತಮ ಶಿಕ್ಷಕ ಪ್ರಶಸ್ತಿ ನೀಡಲಾಗುತ್ತಿದೆ. ಒಟ್ಟು ರಾಜ್ಯ ಮಟ್ಟದ 50 ಶಿಕ್ಷಕ: ಶಿಕ್ಷಕಿಯರಿಗೆ ಪ್ರಶಸ್ತಿ ನೀಡಲಾಗುವುದು. ಪ್ರತಿ ವಿಭಾಗಕ್ಕೆ ಒಂದು ಅತ್ಯುತ್ತಮ ಶಾಲೆಯನ್ನು ಗುರುತಿಸಿ 4 ಶಾಲೆಗಳಿಗೆ ಪ್ರಶಸ್ತಿ ನೀಡಲಾಗುತ್ತಿದೆ.

ಮಹಿಳಾ ದಿನಾಚರಣೆ : ಪ್ರತಿ ವರ್ಷ ಮಾರ್ಚ್ 8 ರಂದು ಮಹಿಳಾ ದಿನಾಚರಣೆಯನ್ನು 2011 ರಿಂದ ಸಂಘದ ವತಿಯಿಂದ ಆಚರಿಸಲಾಗುತ್ತಿದೆ. ಮಾಜಿ ಮುಖ್ಯಮಂತ್ರಿಗಳಾದ ಶ್ರೀ. ಜಗದೀಶ್ ಶೆಟ್ಟರವರು ಹುಬ್ಬಳಿಯಲ್ಲಿ ಜರುಗಿದ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿದರು. ಪ್ರತಿ ವರ್ಷ ಆಚರಿಸುವ ಈ ಕಾರ್ಯಕ್ರಮದಲ್ಲಿ ಅನೇಕ ಸಚಿವರು, ಶಾಸಕರು ಗಣ್ಯರು, ಭಾಗವಹಿಸಿದ್ದಾರೆ. ಈ ಸಂದರ್ಭಧಲ್ಲಿ ಉದ್ಯೋಗಸ್ಥ ಮಹಿಳೆ ಎದುರಿಸುತ್ತಿರುವ ಸಮಸ್ಯೆ ಮತ್ತು ಸವಾಲುಗಳು, ಮಹಿಳಾ ಸಬಲೀಕರಣ ಇನ್ನಿತರ ವಿಷಯಗಳ ಬಗೆಗೆ ಚಿಂತನಾಗೋಷ್ಠಿ ಏರ್ಪಡಿಸಲಾಗಿತ್ತು. ಸಮಾಜದ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಮಹಿಳೆಯನ್ನು ಗುರುತಿಸಿ, “ಸಾವಿತ್ರಿಬಾಯಿ ಪುಲೆ” ಪ್ರಶಸ್ತಿ ನೀಡಲಾಯಿತು.

ವಿಭಾಗ ಮಟ್ಟದ ಕಾರ್ಯಕ್ರಮಗಳು : ಸಂಘದ ಸಂಘಟನೆಯನ್ನು ಬಲಪಡಿಸುವ ದಿಸೆಯಲ್ಲಿ ಪ್ರತಿ ವಿಭಾಗ ಮಟ್ಟದಲ್ಲಿ ಪ್ರತಿ ವರ್ಷ ಸಭೆಗಳನ್ನು ಕಾರ್ಯಕ್ರಮಗಳನ್ನು ಏರ್ಪಡಿಲಾಗುತ್ತಿದೆ. ಆಯಾ ಆಯಾ ವಿಭಾಗದ ಉಪನಿರ್ದೇಶಕರುಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಾಲ್ಲೂಕು, ಜಿಲ್ಲಾ, ಅಧ್ಯಕ್ಷ ಕಾರ್ಯದರ್ಶಿ ಮುಖಾ ಮುಖಿ ಕಾರ್ಯಕ್ರಮಗಳನ್ನು ಧಾರವಾಡ ವಿಭಾಗ ಮಟ್ಟದಲ್ಲಿ ಏರ್ಪಡಿಸಲಾಯಿತು.

ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಫೆಡರೇಷನ್‌ನೊಂದಿಗೆ ಸಂಯೋಜನೆ : ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ 1981ರಿಂದ ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಫೆಡರೇಷನ್‌ನೊಂದಿಗೆ ಸಂಯೋಜನೆ ಹೊಂದಲು ಸತತ ಪ್ರಯತ್ನ ಮಾಡಿತ್ತು. ಮಾಜಿ ಅಧ್ಯಕ್ಷ ಇ. ಉಮಾಪತಿ, ಮಾಜಿ ಪ್ರಧಾನ ಕಾರ್ಯದರ್ಶಿ ಡಾ: ಕೆ.ಎಲ್. ಜಯಶಂಕರ್ ರವರ ಅವಧಿಯಲ್ಲಿ ನಿರಂತರ ಪ್ರಯತ್ನ ಮಾಡಿದ್ದರು. ಆ ಸಂದರ್ಭದಲ್ಲಿ ಈಗಿನ ರಾಜ್ಯ ಅಧ್ಯಕ್ಷರಾದ ಬಸವರಾಜ ಗುರಿಕಾರ ರವರು ಧಾರವಾಡ ತಾಲ್ಲೂಕು ಅಧ್ಯಕ್ಷರಾಗಿ ಕಾರ್ಯ ಮಾಡುತ್ತಿದ್ದರು. ಎ.ಐ.ಪಿ.ಟಿ.ಎಫ್ ನೊಂದಿಗೆ ಸಂಯೋಜನೆ ಹೊಂದುವ ಪ್ರಯತ್ನ ವಿಫಲವಾದಾಗ ದಿ: ಕೆ.ಎಲ್. ಜಯಶಂಕರ್ ಮುಂದೆಯೂ ಸಹ ಈ ಪ್ರಯತ್ನ ಮುಂದುವರಿಸಿ ಎಂದು ಹೇಳಿದ ಮಾತು ಇಂದು ನೆನಪಿಸಿಕೊಳ್ಳುವುದು ನಮ್ಮ ಜವಬ್ದಾರಿಯಾಗಿದೆ ಅಧ್ಯಕ್ಷರಾದ ಬಸವರಾಜ ಗುರಿಕಾರ ರವರ ಸತತ ಪ್ರಯತ್ನ ಇವತ್ತು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಫೆಡರೇಷನ್‌ನ ಸಂಯೋಜನೆ ಹೊಂದಿದೆ. ತನ್ಮೂಲಕ ಎಜುಕೇಷನಲ್ ಇಂಟರ್ ನ್ಯಾಷನಲ್‌ದ (ಇ.ಐ) ಸದಸ್ಯತ್ವ ಹೊಂದಿದೆ. ಎಜುಕೇಷನಲ್ ಇಂಟರ್ ನ್ಯಾಷನಲ್‌ದಲ್ಲಿ 187 ರಾಷ್ಟ್ರಗಳು ಸದಸ್ಯತ್ವ ಪಡೆದಿದೆ. ಪ್ರಾಥಮಿಕ ಶಾಲಾ ಶಿಕ್ಷಕರ ಹಾಗೂ ಶಿಕ್ಷಣದ ಬಲವರ್ಧನೆಗೆ ಶ್ರಮಿಸುವುದು ಎಜುಕೇಷನ್ ಇಂಟರ್ ನ್ಯಾಷನಲ್ ಉದ್ದೇಶವಾಗಿದೆ. ರಾಜ್ಯದಲ್ಲಿ ಬಲಾಡ್ಯ ವಾಗಿದ್ದು, ಸರ್ಕಾರದಿಂದ ಮಾನ್ಯತೆ ಪಡೆದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸ್ಥಾಪಿತವಾಗಿ 44 ವರ್ಷಗಳ ನಮ್ಮ ನಿಮ್ಮೆಲ್ಲರ ಸಂಘಟನಾಶೀಲ ಮನೋಭಾವದಿಂದ, ರಾಷ್ಟ್ರೀಯ, ಅಂತರ್ ರಾಷ್ಟ್ರೀಯ ಮಟ್ಟದ ಸಂಯೋಜನೆ ಹೊಂದಿದೆ ಎಂದು ಹೇಳಲು ಅತೀವ ಸಂತೋಷವೆನಿಸುತ್ತದೆ. ಇದನ್ನು ಉಳಿಸಿ ಬೆಳಿಸಿಕೊಂಡು ಹೋಗೋಣ ನಮ್ಮ ಶಿಕ್ಷಣ ಸಮುದಾಯದ ಪ್ರತಿನಿದಿಗಳು, ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವ ರೀತಿಯಲ್ಲಿ ಕಾರ್ಯನಿರ್ವಹಿಸೋಣ ಎಂದು ಅಶಿಸೋಣ.

ನಾಯಕತ್ವ ಸಾಮರ್ಥ್ಯಾಭಿವೃದ್ಧಿ ಕಾರ್ಯಗಾರ : ಸ್ವೀಡನ್ ದೇಶದ ಟೀಚರ‍್ಸ್ ಯೂನಿಯನ್ ಎಜುಕೇಷನಲ್ ಇಂಟರ್ ನ್ಯಾಷನಲ್, ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಫೆಡರೇಷನ್ ಸಹಯೋಗದಲ್ಲಿ ನಾಯಕತ್ವ ಸಾಮರ್ಥ್ಯ ಅಭಿವೃದ್ಧಿಯ ಎರಡು ದಿವಸದ ಕಾರ್ಯಗಾರ, ಧಾರವಾಡ, ಗುಲ್ಬರ್ಗಾ ವಿಭಾಗದ ಜಿಲ್ಲಾ ಅಧ್ಯಕ್ಷ, ಕಾರ್ಯದರ್ಶಿಗಳ ಕಾರ್ಯಗಾರ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಕೇಂದ್ರ ಧಾರವಾಡ ಇಲ್ಲಿ ದಿನಾಂಕ: 08-03-2014 ರಂದು ಸಂಘದ ಸಂಘಟನೆಯಲ್ಲಿ ನಾಯಕತ್ವ ಯಾವ ರೀತಿ ಇರಬೇಕು, ಸಾಮಾರ್ಥ್ಯವನ್ನು ಹೇಗೆ ರೂಡಿಸಿಕೊಳ್ಳಬೇಕು ಎಂಬ ದಿಸೆಯಲ್ಲಿ ಈ ಕಾರ್ಯಗಾರವನ್ನು ಏರ್ಪಡಿಸಲಾಗಿತ್ತು. ಎ.ಐ.ಪಿ.ಟಿ.ಎಫ್ ಸಂಯೋಜಕ ಶ್ರೀ. ಕಮಲಕಾಂತ್ ತ್ರಿಪಾಠಿ, ಶಿಕ್ಷಣ ತಜ್ಞ ಡಾ: ವಿ.ಪಿ. ನಿರಂಜನಾರಾಧ್ಯ ಕಾರ್ಯಗಾರದಲ್ಲಿ ಉಪನ್ಯಾಸ ನೀಡಿದರು. ಇದೇ ರೀತಿ ದಿನಾಂಕ: 12-03-2014 ರಿಂದ 14-12-2014 ರವರೆಗೆ ಬೆಂಗಳೂರು. ಮೈಸೂರು ವಿಭಾಗದ ಜಿಲ್ಲಾ ಅಧ್ಯಕ್ಷ, ಕಾರ್ಯದರ್ಶಿಗಳಿಗೆ ಶಿಕ್ಷಕ ಸದನ ಬೆಂಗಳೂರು ಇಲ್ಲಿ ನಾಯಕತ್ವ ಸಾಮರ್ಥ್ಯಾಭಿವೃದ್ಧಿ ಕಾರ್ಯಗಾರ ಜರುಗಿತು. ರಾಷ್ಟ್ರೀಯ ಸಂಯೋಜಕ ಶ್ರೀ. ಕಮಲಕಾಂತ್ ತ್ರಿಪಾಠಿ, ಶಿಕ್ಷಣ ತಜ್ಞ ಡಾ: ವಿ.ಪಿ. ನಿರಂಜನಾರಾಧ್ಯ ಅತಿಥಿ ಉಪನ್ಯಾಸಕರಾಗ ಆಗಮಿಸಿದ್ದರು. ಇದೇ ರೀತಿ ಮುಂಬರುವ ದಿವಸಗಳಲ್ಲಿ ತಾಲ್ಲೂಕು ಪದಾಧಿಕಾರಿಗಳಿಗೆ ಪ್ರತಿನಿಧಿಗಳಿಗೆ, ಕಾರ್ಯಗಾರಗಳು ಶೀಘ್ರದಲ್ಲಿಯೇ ಆರಂಭವಾಗಲಿದೆ. ಸಂಘ ಮತ್ತು ಸಂಘಟನೆ, ಶಿಕ್ಷಣದ ಸಬಲೀಕರಣ, ವಿವಿಧ ರಾಜ್ಯ, ದೇಶಗಳ ಶಿಕ್ಷಕರ, ಶಿಕ್ಷಣದ ಸ್ಥಿತಿಗತಿಗಳ ಬಗೆಗೆ ಕಾರ್ಯಗಾರವನ್ನು ಆಯೋಜಿಸಲಾಗುವುದು.

ರಾಷ್ಟ್ರೀಯ ಶಿಕ್ಷಣ ಯಾತ್ರೆ: ಸರ್ವರಿಗೂ ಸಮಾನ ಗುಣಾತ್ಮಕ ಶಿಕ್ಷಣ ನೀಡುವ ಸಂಬಂದ ಕೇಂದ್ರ, ರಾಜ್ಯ ಸರ್ಕಾರದ ಗಮನ ಸೆಳೆಯಲು ರಾಷ್ಟ್ರೀಯ ಶಿಕ್ಷಣ ಯಾತ್ರೆ 02-02-2014 ರಿಂದ 04-12-2014 ರವರೆಗೆ ಕರ್ನಾಟಕ ರಾಜ್ಯದಲ್ಲಿ ಸಂಚರಿಸಿತು. ರಾಷ್ಟ್ರೀಯ ಮಟ್ಟದಲ್ಲಿ ಎಲ್ಲಾ ರಾಜ್ಯಗಳಲ್ಲಿ ಶಿಕ್ಷಣ ಯಾತ್ರೆ ಜರುಗಿತು. ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಫೆಡರೇಷನ್ ಮಹಾ ಪ್ರಧಾನ ಕಾರ್ಯದರ್ಶಿ ಶ್ರೀ. ಈಶ್ವರನ್ ರವರ ನಾಯಕತ್ವದಲ್ಲಿ ಕನ್ಯಾಕುಮಾರಿಯಿಂದ ಬೆಂಗಳೂರಿಗೆ ದಿನಾಂಕ: 02-03-2014 ರಂದು ಯಾತ್ರ ಆಗಮಿಸಿತು. ತದ ನಂತರ ಕರ್ನಾಟಕ ರಾಜ್ಯಾದ್ಯಂತ ಸಂಚರಿಸಿ ಯಶಸ್ವಿಯಾಗಿ ಮುಕ್ತಾಯಗೊಂಡು ಗೋವಾ ರಾಜ್ಯಕ್ಕೆ ಪ್ರಯಾಣ ಮಾಡಿತು.

5 ಮತ್ತು 6 ನೇ ವೇತನ ಆಯೋಗಕ್ಕೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಅಧ್ಯಕ್ಷರಾದ ಬಸವರಾಜ ಗುರಿಕಾರ ರವರು ವಸ್ತು ನಿಷ್ಠವಾದ ವರದಿಯನ್ನು ತಯಾರಿಸದ್ದರಿಂದ ಅದರ ಫಲವಾಗಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪ್ರತ್ಯೇಕ ವೇತನ ಶ್ರೇಣಿ ಲಭಿಸಿತು. ಜೊತೆಗೆ 300 ರೂಪಾಯಿ ವಿಶೇಷ ವೇತನವೂ ಸಹ ದೊರೆಯುತ್ತಿರುವುದು ಸಂಘದ ಪ್ರಮುಖ ಸಾಧನೆಯಾಗಿದೆ.

ರಾಷ್ಟ್ರ ಮಟ್ಟದ ಶೈಕ್ಷಣಿಕ ಸಮ್ಮೇಳನ ಡಿಸೆಂಬರ್ 2015ರ 19 ಮತ್ತು 20 ರಂದು ಐತಿಹಾಸಿಕ ಹಿನ್ನೆಲೆಯುಳ್ಳ ಬೆಂಗಳೂರಿನಲ್ಲಿ ಜರುಗುತ್ತಿರುವುದು ರಾಜ್ಯದ ಶಿಕ್ಷಕರುಗಳಿಗೆ ಸಂದ ಗೌರವವಾಗಿದೆ. ಶೈಕ್ಷಣಿಕ ಹಾಗೂ ಶಿಕ್ಷಕರ ಬೇಕು ಬೇಡಿಕೆಗಳನ್ನು ಸಮ್ಮೇಳನದಲ್ಲಿ ಮಂಡಿಸುವ ಮುಂಖಾತರ ಬೇಕು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯ ಮಾಡಲಾಗುವುದು. ಸಂಘ ಶಕ್ತಿಯಿಂದ “ಜಯ” ಸಾಧ್ಯವೆಂಬುದನ್ನು ಈ ಹಿಂದೆ ತೋರಿಸಿಕೊಟ್ಟಿದ್ದೇವೆ. ಈ ರಾಷ್ಟ್ರ ಮಟ್ಟದ ಸಮ್ಮೇಳನ ಮಾದರಿ ಸಮ್ಮೇಳನವನ್ನಾಗಿ ಮಾಡುವಲ್ಲಿ ರಾಜ್ಯದ ಸಮಸ್ತ ಶಿಕ್ಷಕರ, ಪದಾಧಿಕಾರಿಗಳ ಪಾತ್ರ ಅವಿಸ್ಮರಣೀಯ, ಸಮ್ಮೇಳನದ ರೂಪ ರೇಷೆ ಹಾಗೂ ಸಂಘದ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಸಂಘದ ರಾಜ್ಯ ಪದಾಧಿಕಾರಿಗಳಿಗೆ ಜಿಲ್ಲಾ, ತಾಲ್ಲೂಕು, ಅಧ್ಯಕ್ಷರಿಗೆ ಕಾರ್ಯದರ್ಶಿಗಳಿಗೆ, ಪದಾಧಿಕಾರಿಗಳಿಗೆ, ಪ್ರತಿನಿಧಿಗಳಿಗೆ, ಕಾರ್ಯಕಾರಿ ಸಮಿತಿ ಸದಸ್ಯರುಗಳಿಗೆ ಅಭಿನಂದನೆಗಳು.